ಶ್ರೀ ಸದ್ಗುರು ಕಬೀರಾನಂದಾಶ್ರಮದ 90ನೇ ಮಹಾಶಿವರಾತ್ರಿಯ 5ನೇ ದಿನದ ಕಾರ್ಯಕ್ರಮ
ಮಹಾಶಿವರಾತ್ರಿಯ 5ನೇ ದಿನದ ಪಾವನ ಸಾನ್ನಿಧ್ಯ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಸಿರಿಗೆರೆ ಪೀಠಾಧ್ಯಕ್ಷರಾದ, ಪರಮಪೂಜ್ಯ ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾದೀಶ್ವರ 1108 ಜಗದ್ಗುರು ಶ್ರೀ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ದಿವ್ಯಸಾನ್ನಿಧ್ಯ ಶ್ರೀ ಸದ್ಗುರು ಶಿವಲಿಂಗಾನಂದಸ್ವಾಮಿಜಿಗಳು, ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠ ಚಿತ್ರದುರ್ಗದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮಿಗಳವರು ಹಾಗೂ ಕೊರಟಗೆರೆ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನದ ಶ್ರೀ ಹನುಮಂತನಾಥ ಸ್ವಾಮಿಗಳು ಕೂಸನೂರು ಶ್ರೀ ತಿಪ್ಪಯ್ಯಸ್ವಾಮಿ ಮಠದ ಶ್ರೀ ಜ್ಯೋತಿರ್ಲಿಂಗಾನಂದ ಮಹಾಸ್ವಾಮಿಗಳು.
ನೊಂದು
ಬೆಂದ ಜೀವಗಳಿಗೆ
ಹಬ್ಬ ಹರಿದಿನಗಳು
ಉಲ್ಲಾಸ: ಸಿರಿಗೆರೆ
ಶ್ರೀ ಡಾ.
ಶಿವಮೂರ್ತಿ ಶಿವಾಚಾರ್ಯ
ಮಹಾಸ್ವಾಮಿಗಳು- ಸಾಂಸಾರಿಕವಾಗಿ ನೊಂದು ಬೆಂದ ಜೀವಗಳಿಗೆ ಹಬ್ಬ ಹರಿದಿನಗಳು ಉಲ್ಲಾಸ, ಸಂಭ್ರಮವನ್ನು ಕೊಡುತ್ತವೆ ಎಂದು ಸಿರಿಗೆರೆ ತರಳಬಾಳು ಜಗದ್ಗುರು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಕಬೀರಾನಂದಾಶ್ರಮದಲ್ಲಿ ನಡೆಯುತ್ತಿರುವ ೯೦ ನೇ ಮಹಾಶಿವರಾತ್ರಿ ಮಹೋತ್ಸವದ ಐದನೇ ದಿನದ ಕಾರ್ಯಕ್ರಮದಲ್ಲಿ ಶುಕ್ರವಾರ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಬೇಸಿಗೆ ಕಾಲದಲ್ಲಿ ಮರದ ಎಲೆಗಳೆಲ್ಲಾ ಉದುರಿ ನಂತರ ವಸಂತ ಕಾಲದಲ್ಲಿ ಹೇಗೆ ಚಿಗುರಿನಿಂದ ಕೂಡಿರುತ್ತದೋ ಅದೇ ರೀತಿ ಹಬ್ಬಗಳು ಮನುಷ್ಯನ ಮನಸ್ಸಿಗೆ ಮುದ ನೀಡುತ್ತವೆ. ಶಿವರಾತ್ರಿಗೆ ವಿಶಿಷ್ಟತೆಯಿದೆ. ಬಿಲ್ವಪತ್ರೆ ಶಿವನಿಗೆ ಹೇಗೆ ಪ್ರಿಯವಾದುದು ಎನ್ನುವುದನ್ನು ವಿಚಾರವಂತರು ಆಲೋಚನೆ ಮಾಡಬೇಕು. ಅರಿವಿಲ್ಲದೆ ಪ್ರಜ್ಞೆಯಿರದೆ ಮಾಡುವ ಯಾವ ಕೆಲಸವೂ ಒಳ್ಳೆಯದಾಗುವುದಿಲ್ಲ. ಮಾಡುವ ಕ್ರಿಯೆ ಚೆನ್ನಾಗಿದ್ದರೆ ಒಳ್ಳೆಯ ಫಲ ಸಿಗುತ್ತದೆ. ಶ್ರದ್ದೆ ಭಕ್ತಿಯಿಲ್ಲದ ಪೂಜೆಯಿಂದ ಎಂದಿಗೂ ಉತ್ತಮ ಫಲ ಸಿಗುವುದಿಲ್ಲ. ಶಿವರಾತ್ರಿಯಂದು ರಾತ್ರಿಯಿಡಿ ಜಾಗರಣೆ, ಭಜನೆ ಮಾಡಿದರೆ ಪ್ರಯೋಜನವಿಲ್ಲ. ಅದಕ್ಕೆ ಬದಲಾಗಿ ನಿತ್ಯ ನಿರಂತರವೂ ಸದ್ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ ಎಂದು ತಿಳಿಸಿದರು.
ಜಾಗರಣೆ ಹಿಂದೆ ತಾತ್ವಿಕ ಅರ್ಥವಿದೆ. ನಡೆ, ನುಡಿ, ಮಾತಿನಲ್ಲಿ ಎಚ್ಚರವಿರುವುದೇ ಜಾಗರಣೆ. ಒಳ ಎಚ್ಚರವಿರಬೇಕು. ಇಲ್ಲದಿದ್ದರೆ ಜಡ್ಡುಗಟ್ಟಿದ ಸಂಪ್ರದಾಯವಾಗುತ್ತದೆ. ಜನರಲ್ಲಿ ಸದಭಿರುಚಿ ಮೂಡಿಸುವ ಕಾರ್ಯಕ್ರಮಗಳನ್ನು ನೀಡಿ ಸದಾಚಾರ ಸಂಪನ್ನರಾಗಿ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕಬೀರಾನಂದಾಶ್ರಮದ ಶಿವಲಿಂಗಾನಂದ ಮಹಾಸ್ವಾಮಿಗಳು ಪ್ರತಿ ವರ್ಷವೂ ಶಿವರಾತ್ರಿ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಧರ್ಮ ಎಂದರೆ ರಿಲೀಜಿಯನ್ ಅಲ್ಲ. ಅಸೂಯೆ, ದ್ವೇಷ, ದುರ್ಗುಣಗಳನ್ನು ಮನುಷ್ಯ ಹೋಗಲಾಡಿಸಿ ಒಳ್ಳೆಯ ನಡೆ, ನುಡಿಯಿಂದ ಇರುವುದೇ ನಿಜವಾದ ಧರ್ಮ. ಧರ್ಮ ಎನ್ನುವುದು ನಾನಾ ಭಾಷೆಯಲ್ಲಿ ಬಳಕೆಯಾಗುತ್ತಿದೆ. ನಿಜ ಅರ್ಥದಲ್ಲಿ ಅದು ಧರ್ಮವಲ್ಲ ಎಂದರು.
ಇಂದಿನ ಯುವಕರಿಗೆ ಆಧ್ಯಾತ್ಮದಲ್ಲಿ ಪಾತ್ರ ಎನ್ನುವ ವಿಷಯ ಕುರಿತು ನಿವೃತ್ತ ಆಂಗ್ಲ ಪ್ರಾಧ್ಯಾಪಕ ಶರಣಪ್ಪ ಉಪನ್ಯಾಸ ನೀಡಿ ೨೧ ನೇ ಶತಮಾನದಲ್ಲಿ ವಿಜ್ಞಾನ, ತಂತ್ರಜ್ಞಾನ ಶರವೇಗದಲ್ಲಿ ಬೆಳೆಯುತ್ತಿದೆ. ಚಂದ್ರಲೋಕದಲ್ಲಿರುವವರನ್ನು ಇಲ್ಲಿಂದಲೆ ಸಂಪರ್ಕಿಸಬಹುದು. ವಿಜ್ಞಾನ ಅಷ್ಟೊಂದು ಮುಂದುವರೆದಿದೆ. ಯುವಕ/ಯುವತಿಯರಲ್ಲಿ ಆಧ್ಯಾತ್ಮದ ಒಲವು ಕಡಿಮೆಯಾಗಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಮಾಡುವ ಕ್ರಿಯೆಯ ಮೇಲೆ ಭಕ್ತಿ, ಶ್ರದ್ದೆಯಿಡುವುದಕ್ಕಿಂತ ಮಿಗಿಲಾದ ಸಂತೋಷ ಮತ್ತೊಂದಿಲ್ಲ. ಇದರಿಂದ ಸಂತೋಷದ ಜೊತೆ ಕೀರ್ತಿ ಪ್ರಾಪ್ರಿಯಾಗುತ್ತದೆ. ಭರತಖಂಡ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಆಧ್ಯಾತ್ಮಿಕವಾಗಿ ನಮ್ಮನ್ನು ಸರಿಗಟ್ಟುವ ದೇಶ ಬೇರೆಯಿಲ್ಲ. ಇಂದಿನ ಪೀಳಿಗೆ ಹೆತ್ತವರು, ವಿದ್ಯೆ ಕಲಿಸಿದ ಗುರುಗಳನ್ನು ಮರೆಯುತ್ತಿದ್ದಾರೆ. ಇದಕ್ಕೆ ಆಧ್ಯಾತ್ಮಿಕವಾಗಿ ಟೊಳ್ಳಾಗಿರುವುದೇ ಕಾರಣ ಎಂದು ಹೇಳಿದರು.
ಶ್ರೀ ಸದ್ಗುರು ಕಬೀರಾನಂದಾಶ್ರಮದ 90ನೇ ಮಹಾಶಿವರಾತ್ರಿಯ 5ನೇ ದಿನದ ದಿವ್ಯಸಾನ್ನಿಧ್ಯವಹಿಸಿ ಆರ್ಶೀವಚನ ನೀಡಿದ ಶ್ರೀ ಸದ್ಗುರು ಶಿವಲಿಂಗಾನಂದಸ್ವಾಮಿಜಿಗಳು ಮಾತನಾಡಿ, ಜಗದೊಳಗೆ ಕಾಲಗರ್ಭದಲ್ಲಿ ಸರ್ವ ವಸ್ತುಗಳು ಲಯವಾಗಿವೆ, ಮಾನವ ಬದುಕಿಗೂ ಸಹ ಕಾಲವನ್ನು ಮಿತಿಗೊಳಿಸಲಾಗಿದೆ, ಈ ಕಾಲಮಿತಿಯನ್ನು ಜ್ಯೋತಿಷ್ಯವೆಂತಲೂ ಕರೆಯಲಾಗಿದೆ. ಕಾಲಘಟ್ಟವೂ ಸಕಲವನ್ನು ನಿಯಂತ್ರಿಸುವ ಶಕ್ತಿಯಾಗಿದೆ. ಲಯಕರ್ತನಾದ ಶಿವನ ಆರಾಧನೆಯಿಂದ ಎಲ್ಲವನ್ನು ನೀಡುವ ಶಕ್ತಿ ಅವನಿಗಿದೆ, ಶಿವಕೊಟ್ಟ ಸಂಪತ್ತಿನಿಂದ ಮನುಷ್ಯ ತಾನು ಬದಲಾದರೆ ನಾಶ ಖಚಿತವಾದುದು, ಹಾಗಾಗಿ ಸಂಪತ್ತನ್ನು ಮಂಗಳ ಕಾರ್ಯಗಳಿಗೆ ಸದ್ಬಳಕೆ ಮಾಡಬೇಕು. ಮನುಜ ಕುಲಕೆ ಶಿವನ ಕೃಪೆಯಿಂದ ಸಕಲವೂ ಪ್ರಾಪ್ತಿಯಾಗಿದೆ, ಶಿವನೊಲುಮೆಗೆ ಸುಕೃತಿನ ಸೇವೆ ಹಾಗೂ ನಿಸ್ವಾರ್ಥ ಭಕ್ತಿಯಿರಬೇಕು. ಈ ಮಹಾಶಿವರಾತ್ರಿಯ ದಿನ ಸದಾಚಾರ, ಶಿವಧ್ಯಾನ, ಶಿವಭಜನೆ, ಶಿವನಾಮ ಸಪ್ತಾಹಗಳೆಲ್ಲವು ನಮಗೆ ಮಾರ್ಗಗಳಾಗಿವೆ ಹಾಗಾಗಿ ಎಲ್ಲರೂ ಇಂತಹ ಸದಭಿರುಚಿಯ ಸಂಸ್ಕಾರದ ಕಾರ್ಯಗಳಲ್ಲಿ ಭಾಗವಹಿಸಿ ಶಿವನ ಕೃಪೆಗೆ ಪಾತ್ರರಾಗುವಂತೆ ಕರೆನೀಡಿದರು.
"ಇಂದಿನ ಯುವಕರಿಗೆ ಆಧ್ಯಾತ್ಮದಲ್ಲಿ ಪಾತ್ರ" ಎನ್ನುವ ವಿಷಯ ಕುರಿತು ನಿವೃತ್ತ ಆಂಗ್ಲ ಪ್ರಾಧ್ಯಾಪಕ ಶ್ರೀ ಶರಣಪ್ಪ ಉಪನ್ಯಾಸ ನೀಡಿ ೨೧ ನೇ ಶತಮಾನದಲ್ಲಿ ವಿಜ್ಞಾನ, ತಂತ್ರಜ್ಞಾನ ಶರವೇಗದಲ್ಲಿ ಬೆಳೆಯುತ್ತಿದೆ. ಚಂದ್ರಲೋಕದಲ್ಲಿರುವವರನ್ನು ಇಲ್ಲಿಂದಲೆ ಸಂಪರ್ಕಿಸಬಹುದು. ವಿಜ್ಞಾನ ಅಷ್ಟೊಂದು ಮುಂದುವರೆದಿದೆ. ಯುವಕ/ಯುವತಿಯರಲ್ಲಿ ಆಧ್ಯಾತ್ಮದ ಒಲವು ಕಡಿಮೆಯಾಗಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಮಾಡುವ ಕ್ರಿಯೆಯ ಮೇಲೆ ಭಕ್ತಿ, ಶ್ರದ್ದೆಯಿಡುವುದಕ್ಕಿಂತ ಮಿಗಿಲಾದ ಸಂತೋಷ ಮತ್ತೊಂದಿಲ್ಲ. ಇದರಿಂದ ಸಂತೋಷದ ಜೊತೆ ಕೀರ್ತಿ ಪ್ರಾಪ್ರಿಯಾಗುತ್ತದೆ. ಭರತಖಂಡ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ. ಆಧ್ಯಾತ್ಮಿಕವಾಗಿ ನಮ್ಮನ್ನು ಸರಿಗಟ್ಟುವ ದೇಶ ಬೇರೆಯಿಲ್ಲ. ಇಂದಿನ ಪೀಳಿಗೆ ಹೆತ್ತವರು, ವಿದ್ಯೆ ಕಲಿಸಿದ ಗುರುಗಳನ್ನು ಮರೆಯುತ್ತಿದ್ದಾರೆ. ಇದಕ್ಕೆ ಆಧ್ಯಾತ್ಮಿಕವಾಗಿ ಟೊಳ್ಳಾಗಿರುವುದೇ ಕಾರಣ ಎಂದು ಹೇಳಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ವಸಂತಕುಮಾರ್ ಮಾತನಾಡಿ ಶಿವರಾತ್ರಿಯೆಂದರೆ ಬಹಿರಂಗವಾಗಿ ಜಾಗರಣೆ ಮಾಡಿ ಎಚ್ಚರದಿಂದಿರುವುದಲ್ಲ. ಆಂತರಿಕವಾಗಿ ನಿರಂತರ ಎಚ್ಚರಿಕೆಯಿಂದಿರಬೇಕು. ಬೈಯುವುದನ್ನೇ ಬಂಡಾಯ ಎಂದುಕೊಳ್ಳುವುದಾದರೆ ಯಾವ ಬದಲಾವಣೆಯನ್ನು ಕಾಣಲು ಸಾಧ್ಯವಿಲ್ಲ. ದಶರಥ, ರಾಮ, ಭರತ ತಮಗೆ ತಾವೇ ಧಿಕ್ಕಾರ ಹಾಕಿಕೊಳ್ಳುತ್ತಾರೆ. ಏಕೆಂದರೆ ಅವರುಗಳು ಮಾಡಿದ ತಪ್ಪಿನ ಅರಿವಾಗಿರುತ್ತದೆ. ಮತ, ಧರ್ಮ ಬೇರೆ ಬೇರೆ ಪ್ರತಿಯೊಬ್ಬ ಮನುಷ್ಯನು ಧರ್ಮದ ನೈತಿಕ ಕಾವಲುಗಾರನಾಗಬೇಕೆಂದರು.
ಅಂಬೇಡ್ಕರ್, ಗಾಂಧಿ ವಿಚಾರಗಳನ್ನು ಪ್ರಾಥಮಿಕ ಹಂತದಿಂದ ಹಿಡಿದು ಉನ್ನತ ಶಿಕ್ಷಣದವರೆಗೆ ಮಕ್ಕಳಿಗೆ ಬೋಧಿಸಿದ್ದರೆ ಇಂದು ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿ ಭಾರತಕ್ಕೆ ಅವಮಾನ ಮಾಡುವ ಪರಿಸ್ಥಿತಿ ಬರುತ್ತಿರಲಿಲ್ಲ. ಎಲ್ಲಾ ಜಾತಿ ಜನರು ಸೇರಿ ಕಟ್ಟಿದ ಭಾರತದಲ್ಲಿ ಜ್ಞಾನ ಪರಂಪರೆ ಕಳೆದುಕೊಂಡಿದ್ದೇವೆ. ವೇದ, ಉಪನಿಷತ್ತು, ಸಂಸ್ಕೃತ ಒಂದು ಜಾತಿಗೆ ಸೀಮಿತವಲ್ಲ. ಶಿವರಾತ್ರಿಗೂ ಬೇಡರಕಣ್ಣಪ್ಪನಿಗೂ ನಂಟಿದೆ. ಮತಕ್ಕಿಂತ ದೇಶ ದೊಡ್ಡದು. ದೇಶಕ್ಕಿಂತ ಧರ್ಮ ದೊಡ್ಡದು. ಶಕ್ತಿಯಿಲ್ಲದೆ ಶಿವ ಇಲ್ಲ. ಶಿವನಿಲ್ಲದೆ ಶಕ್ತಿಯಿಲ್ಲ ಎಂದರು.
ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠ ಚಿತ್ರದುರ್ಗದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಮಹಾಸ್ವಾಮಿಗಳವರು ಮಾತನಾಡಿ ಭಾರತದಲ್ಲಿ ಆಚರಣೆಗಳಿಗೆ ಐತಿಹಾಸಿಕ ಹಿನ್ನೆಲೆಯಿದೆ, ಇಂತಹ ಆಚರಣೆಗಳು ಎಂದಿಗೂ ಅಳಿಸಿಹೋಗಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಮನುಕುಲವಿರುವವವರೆಗೂ ನಾಸ್ತಿಕ-ಆಸ್ತಿಕಗಳ ನಡುವೆ ಚರ್ಚೆಗೆ ವಿರಾಮವಿಲ್ಲ. ಆದರೆ ಅದೇಲ್ಲವೂ ನಮ್ಮ ನಮ್ಮ ನಂಬಿಕೆಯ ಮೇಲೆ ನಿರ್ಧಾರವಾಗುತ್ತದೆ. ಸಮಾಜ ಸುಭೀಕ್ಷೆಯಿಂದ ಇರಬೇಕೆಂದರೆ ಆಧ್ಯಾತ್ಮದ ಅರಿವು ಅಗತ್ಯವಾಗಿದೆ. ಅಂಧಾಕಾರದ ಧರ್ಮ ಆಚರಣೆ ಸಮಾಜದ ಶಾಂತಿಯನ್ನು ಕದಡುತ್ತಿದೆ. ಪ್ರಸ್ತುತ ಕಾಲಘಟ್ಟದಲ್ಲಿ ನಮ್ಮ ಯುವಜನತೆಗೆ ಆಧ್ಯಾತ್ಮದ ಸಂಸ್ಕಾರವನ್ನು ನೀಡದಿದ್ದರೆ ಮುಂದೆ ಆತಂಕದ ದಿನವನ್ನು ಎದುರಿಸಬೇಕಾಗುತ್ತದೆ ಎಂದು ಕಳವಳ ವ್ಯಕ್ತಪಡೆಸಿದರು. ನಮ್ಮ ನೆಜ, ಜಲ, ಸಂಸ್ಕøತಿಯನ್ನು ಬೆಳೆಸಲು ನಮಗೆ ಆಧ್ಯಾತ್ಮಿಕ ಅರಿವು ಬೆಳೆಸಿಕೊಳ್ಳುವಂತೆ ತಿಳಿಸಿದರು.
ಕೊರಟಗೆರೆ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನದ ಶ್ರೀ ಹನುಮಂತನಾಥ ಸ್ವಾಮಿಗಳು ಮಾತನಮಾಡಿ, ಸಮಾಜದ ಧೀನದಲಿತರ, ಬಡವಬಲ್ಲಿದ, ಬಿದ್ದವರನ್ನು ಮೇಲೆತ್ತುವ, ಬೆಳೆಸುವ ಮಾತೃಹೃದಯಿ ಸಾಮಿಜಿ ನಮ್ಮ ಕಬೀರಾನಂದಾಶ್ರಮದ ಶಿವಲಿಂಗಾನಂದ ಶ್ರೀಗಳು ಎಂದು ಗುರುವಿಗೆ ವಂದಿಸಿದರು. ಜೀವನ ಸಾರ್ಥಕತೆಗೆ ಸಜ್ಜನರ ಸಂಘ ಬೇಕು, ದುರ್ಜನರ ಸಂಘ ಬಿಟ್ಟು ಧರ್ಮದ ದಾರಿಯ ಸಂಘನ್ನು ಮಾಡಬೇಕು. ಇಂದು ಮಠಮಾನ್ಯಗಳನ್ನು ಕಟ್ಟುವುದು ಬಹಳ ಸುಲಭ ಯಾರು ಬೇಕಾದರು ಈ ಕೆಲಸ ಮಾಡಬಹುದು, ಆದರೆ ಒಳ್ಳೆಯ ಮನಸ್ಸು ಕಟ್ಟುವವರು ಸಿಗುವುದು ವಿರಳ, ಇಂತಹ ಮನಸ್ಸು ಕಟ್ಟುವವರು ನಮ್ಮ ಶ್ರೀ ಶಿವಲಿಂಗಾನಂದಸ್ವಾಮಿಗಳು. ಉತ್ತಮ ವ್ಯಕ್ತಿಯಾಗಲು ಈ ಮೂರು ವ್ಯಕ್ತಿಗಳನ್ನು ಮರೆಯಬಾರದು, ಅನ್ನ ನೀಡುವ ರೈತ, ದೇಶ ಕಾಯುವ ಯೋಧ ಹಾಗೂ ಸುಜ್ಞಾನ ನೀಡುವ ಗುರುವನ್ನು ಮರೆಯಬಾರದು. ಮತ್ತೊಬ್ಬರ ನೋವಿಗೆ ಸ್ಪಂದಿಸುವವರು ಶ್ರೀಮಂತರು, ಸಂಪತ್ತನಿಂದ ಶ್ರೀಮಂತಿಕೆ ವ್ಯಕ್ತಿ ದೊಡ್ಡವನಾಗಲು ಸಾಧ್ಯವಿಲ್ಲ. ಸದ್ಗುರುವಿನ ಅನುಗ್ರಹದಿಂದ ಕಲ್ಲು ಕೂಡ ಶಂಕರನಾಗುತ್ತದೆ, ಇಂತಹ ಗುಣವಿರುವುದು ಗುರುವಿಗೆ, ಹಾಗಾಗಿ ಈ ದಿನ ಶಿವರಾತ್ರಿಯಲ್ಲಿ ಗುರುವಿನ ಅನುಗ್ರಹಕ್ಕಾಗಿ ಪ್ರಾರ್ಥಿಸೋಣ ಎಂದು ಭಕ್ತರಿಗೆ ಕರೆನೀಡಿದರು.
ಕೂಸನೂರು ಶ್ರೀ ತಿಪ್ಪಯ್ಯಸ್ವಾಮಿ ಮಠದ ಶ್ರೀ ಜ್ಯೋತಿರ್ಲಿಂಗಾನಂದ ಮಹಾಸ್ವಾಮಿಗಳು ಮಾತನಾಡಿ 33 ಕೋಟಿ ದೇವತೆಗಳಲ್ಲಿ ಶಿವ ವಿಶೇಷವಾದ ದೇವತೆ, ದೇವರಲ್ಲಿ ಕೇಳುವುದಾದರೆ ಕಣ್ಣು ಒಳ್ಳೆಯದನ್ನು ನೋಡುವಂತೆ, ಕೈ ಒಳ್ಳೆಯದನ್ನು ಮಾಡುವಂತೆ, ಕಾಲುಗಳು ಒಳ್ಳೆಯ ದಾರಿಯಲ್ಲಿ ನಡೆಯುವಂತೆ ಆಶೀವರ್ದಿಸುವಂತೆ ಕೇಳಿಕೊಳ್ಳಬೇಕೆಂದು ತಿಳಿಸಿದರು. ಮಾಜಿ ಸಚಿವ ಹೆಚ್ ಆಂಜನೇಯ, ಹೊಳಲ್ಕೆರೆ ಶಾಸಕ ಎಂ, ಚಂದ್ರಪ್ಪ, ಶ್ರೀ ವಸಂತಕುಮಾರ್ ಅಧ್ಯಕ್ಷರು, ಕನ್ನಡ ಸಾಹಿತ್ಯ ಅಕಾಡೆಮಿ ಬೆಂಗಳೂರು, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಮುಖಂಡ ಕೆ.ಎಸ್. ನವೀನ್, ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಕೆ.ಎಂ. ವೀರೆಶ್, ವಾಣಿಜ್ಯೋಧ್ಯಮಿ ಬಿ ಟಿ ಸಿದ್ದೇಶ್, ರುದ್ರಮುನಿ, ಬಿಜೆಪಿ ಗ್ರಾಮಾಂತರ ಅಧ್ಯಕ್ಷ ನಂದಿ ನಾಗರಾಜ್, ನಗರಸಭೆ ಸದಸ್ಯ ಹೆಚ್. ಶ್ರೀನಿವಾಸ್, ಯುವ ಉದ್ಯಮಿ ನವೀನ್ ಮಂಡಗದ್ದೆ ವೇದಿಕೆಯಲ್ಲಿದ್ದು. ಶ್ರೀ ಕಬೀರಾನಂದಸ್ವಾಮಿ ವಿದ್ಯಾಪೀಠದ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ನೃತ್ಯ ಕಾರ್ಯಕ್ರಮ ಹಾಗೂ ವಿರುಪಾಕ್ಷ ಆಯಿಯೋಳು, ಮನು, ಅಭಿಷೇಕ್, ಎಂ ಮುರುಡ, ಚೇತನ್ ಶಶಿಧರ್‍ರವರು ಭಕ್ತಿಗೀತೆ ಕಾರ್ಯಕ್ರಮ ನಡೆಸಿಕೊಟ್ಟರು. ಜ್ಞಾನವಿಕಾಸ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಸುರೇಶ್ ಸ್ವಾಗತಿಸಿದರು, ಶಿಕ್ಷಕಿ ಶ್ರೀಮತಿ ಬಿ. ಎಸ್. ಜ್ಯೋತಿ ಪ್ರಾರ್ಥಿಸಿದರು, ಶ್ರೀ ನಿರಂಜನ ದೇವರು ಮನೆ ನಿರೂಪಿಸಿದರು.